Wednesday, 18 July 2012

ಕನ್ನಡ ರಾಜ್ಯೋತ್ಸವ


'ಪ್ರಜಾಪ್ರಗತಿ' ವರದಿ

ದಿನಾಂಕ 24-11-2007ರಂದು ಕೊತ್ತಗೆರೆ ಹೋಬಳಿ ಕಸಾಪ ವತಿಯಿಂದ ಹೊನ್ನೇನಹಳ್ಳಿಯ ಸ.ಕಿ.ಪ್ರಾ.ಶಾಲೆಯ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಸಮೂಹ ಸಹಾಯಕ ಶಿಕ್ಷಣಾಧಿಕಾರಿ ಡಿ. ಕೃಷ್ಣ ಧ್ವಜಾರೋಹಣ ನೆರವೇರಿಸಿದರು. ತುಮಕೂರು ಜಿಲ್ಲಾ ಕಸಾಪ ಅಧ್ಯಕ್ಷ ನಿಟ್ಟೂರು ರಾಂಪುರ ಸದಾನಂದ ಕಾರ್ಯಕ್ರಮ ಉದ್ಘಾಟಿಸಿದರು. ಕುಣಿಗಲ್ ತಾಲ್ಲೂಕು  ಕಸಾಪ ಅಧ್ಯಕ್ಷ ತಗಡೂರು ವೀರಭದ್ರಪ್ಪ ಉಪನ್ಯಾಸ ನೀಡಿದರು. ಸಮೂಹ ಸಹಾಯಕ ಶಿಕ್ಷಣಾಧಿಕಾರಿ ಲೋಕೇಶಾಚಾರ್, ಉದ್ಯಮಿಗಳಾದ ಶಿವನಂಜಪ್ಪ ಹಾಗೂ ಪ್ರಕಾಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕೊನೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ತ.ನಂ.ಜ್ಞಾನೇಶ್ವರ, ಮಹಾಲಕ್ಷ್ಮಮ್ಮ, ಚಂದ್ರಶೇಖರ್ ಹಾಗೂ ಕಮಲ ಕವನ ವಾಚಿಸಿದರು. 

No comments:

Post a Comment