Wednesday 8 August 2012

ನೂತನ ಕಾರ್ಯಕಾರಿ ಸಮಿತಿ

ಬಿ.ಎಂವೀರಣ್ಣನವರು ಕೊತ್ತಗೆರೆ ಹೋಬಳಿ ಕಸಾಪ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು

ನಿಕಟಪೂರ್ವ ಅಧ್ಯಕ್ಷರಾದ ತ.ನಂ.ಜ್ಞಾನೇಶ್ವರ ಅವರು ದಾಖಲೆಗಳನ್ನು ಹಸ್ತಾಂತರಿಸಿದರು.
ದಿನಾಂಕ 4-8-2012ರಂದು ಚಿಕ್ಕಣ್ಣಹಟ್ಟಿಯಲ್ಲಿ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ಜರುಗಿತು. ನೂತನ ಅಧ್ಯಕ್ಷರಾದ ಬಿ.ಎಂ.ವೀರಣ್ಣನವರು ತುಮಕೂರು ಜಿಲ್ಲಾ ಕಸಾಪ ಅಧ್ಯಕ್ಷರಾದ ಸೋ.ಮು.ಭಾಸ್ಕರಾಚಾರ್ ಅವರಿಂದ ಬಾವುಟ ಸ್ವೀಕರಿಸುವ ಮೂಲಕ ಅಧಿಕಾರ ವಹಿಸಿಕೊಂಡರು. ಕುಣಿಗಲ್ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಹಿಂದಿನ ಅಧ್ಯಕ್ಷೆ  ಗಾಯತ್ರಿ ಬಲರಾಮರಾಜು, ಈಗಿನ ಅಧ್ಯಕ್ಷ ದಿನೇಶ್ ಕುಮಾರ್ ಉಪಸ್ಥಿತರಿದ್ದರು.

ಅಧ್ಯಕ್ಷರು:                       ಬಿ.ಎಂ.ವೀರಣ್ಣ

ಕಾರ್ಯದರ್ಶಿಗಳು:           ಉಮೇಶ್
                                    ಜಿ.ಶಿವರಾಮಯ್ಯ

ಸಂಘಟನಾ ಕಾರ್ಯದರ್ಶಿ: ವೀರಣ್ಣ

ಖಜಾಂಚಿ:                      ಗಂಗರಂಗಯ್ಯ

ಸಂಚಾಲಕರು:                ನರಸಮ್ಮ

ನಿಕಟಪೂರ್ವ ಅಧ್ಯಕ್ಷರು:   ತ.ನಂ.ಜ್ಞಾನೇಶ್ವರ

ಸದಸ್ಯರು:                     ಎಚ್.ಆರ್.ಸದಾಶಿವಯ್ಯ
                                  ಕೆ.ಎಸ್.ಸಂಪತ್ ಕುಮಾರ್
                                  ಕೃಷ್ಣಯ್ಯ
                                  ಕೆ.ಎಲ್.ರಾಘವೇಂದ್ರಯ್ಯ
                                  ಸುರೇಶಾಚಾರ್
                                  ಕೃಷ್ಣ ನಾಯಕ್
                                  ಮುನಿಯಪ್ಪ
                                  ಯೋಗೀಶ್
                                  ಬಸವರಾಜು

Friday 20 July 2012

ವಿ.ಕೃ.ಗೋಕಾಕ್ ಜನ್ಮ ಶತಮಾನೋತ್ಸವ

'ಪ್ರಜಾವಾಣಿ' ವರದಿ



ಕೊತ್ತಗೆರೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶೆಟ್ಟಿಗೆರೆಯ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ಆವರಣದಲ್ಲಿ ವಿ.ಕೃ.ಗೋಕಾಕ್ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ತುಮಕೂರು ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ.ಡಿ.ಚಂದ್ರಪ್ಪ ಗೋಕಾಕರನ್ನು ಕುರಿತು ಉಪನ್ಯಾಸ ನೀಡಿದರು. ಸಮೂಹ ಸಹಾಯಕ ಶಿಕ್ಷಣಾಧಿಕಾರಿ ಆರ್.ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕುಣಿಗಲ್ ತಾಲ್ಲೂಕು ಕಸಾಪ ಅಧ್ಯಕ್ಷ ಕೆ.ಎಚ್.ವೆಂಕಟೇಶ್ ಉಪಸ್ಥಿತರಿದ್ದರು. ಕೊತ್ತಗೆರೆ ಹೋಬಳಿ ಕಸಾಪ ಅಧ್ಯಕ್ಷ ತ.ನಂ.ಜ್ಞಾನೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು.

Thursday 19 July 2012

ನೂತನ ಕಾರ್ಯಕಾರಿ ಸಮಿತಿ

'ಕನ್ನಡಪ್ರಭ' ವರದಿ

ದಿನಾಂಕ 6-12-2008ರಂದು ಕುಣಿಗಲ್ ನ ಸ್ವಾಮಿ ಪದವಿಪೂರ್ವ ಕಾಲೇಜಿನಲ್ಲಿ ಕುಣಿಗಲ್ ತಾಲ್ಲೂಕು ಕಸಾಪ ಅಧ್ಯಕ್ಷರಾದ ಕೆ.ಎಚ್.ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೊತ್ತಗೆರೆ ಹೋಬಳಿ ವ್ಯಾಪ್ತಿಯ ಕಸಾಪ ಆಜೀವ ಸದಸ್ಯರ ಸಭೆಯಲ್ಲಿ ಕೊತ್ತಗೆರೆ ಹೋಬಳಿ ಘಟಕದ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರು:       ತ.ನಂ.ಜ್ಞಾನೇಶ್ವರ

ಉಪಾಧ್ಯಕ್ಷರು: ಎಚ್.ಈ.ರಾಜಣ್ಣ

ಕಾರ್ಯದರ್ಶಿ: ಮುನಿಯಪ್ಪ

ಖಜಾಂಚಿ:      ಜಿ.ಶಿವರಾಮಯ್ಯ

ಸದಸ್ಯರು:     ವೀರತಿಪ್ಪಯ್ಯ
                   ಆರತಿ ದೇವರಾಜಶೆಟ್ಟಿ
                   ರೇವಣಸಿದ್ಧಪ್ಪ
                   ಮುದ್ದಿನ ಚಿಕ್ಕಣ್ಣ
                   ರಮೇಶ್
                   ದೊಡ್ಡಯ್ಯ
                   ರೇಣುಕಪ್ಪ

Wednesday 18 July 2012

ಕನ್ನಡ ರಾಜ್ಯೋತ್ಸವ


'ಪ್ರಜಾಪ್ರಗತಿ' ವರದಿ

ದಿನಾಂಕ 24-11-2007ರಂದು ಕೊತ್ತಗೆರೆ ಹೋಬಳಿ ಕಸಾಪ ವತಿಯಿಂದ ಹೊನ್ನೇನಹಳ್ಳಿಯ ಸ.ಕಿ.ಪ್ರಾ.ಶಾಲೆಯ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಸಮೂಹ ಸಹಾಯಕ ಶಿಕ್ಷಣಾಧಿಕಾರಿ ಡಿ. ಕೃಷ್ಣ ಧ್ವಜಾರೋಹಣ ನೆರವೇರಿಸಿದರು. ತುಮಕೂರು ಜಿಲ್ಲಾ ಕಸಾಪ ಅಧ್ಯಕ್ಷ ನಿಟ್ಟೂರು ರಾಂಪುರ ಸದಾನಂದ ಕಾರ್ಯಕ್ರಮ ಉದ್ಘಾಟಿಸಿದರು. ಕುಣಿಗಲ್ ತಾಲ್ಲೂಕು  ಕಸಾಪ ಅಧ್ಯಕ್ಷ ತಗಡೂರು ವೀರಭದ್ರಪ್ಪ ಉಪನ್ಯಾಸ ನೀಡಿದರು. ಸಮೂಹ ಸಹಾಯಕ ಶಿಕ್ಷಣಾಧಿಕಾರಿ ಲೋಕೇಶಾಚಾರ್, ಉದ್ಯಮಿಗಳಾದ ಶಿವನಂಜಪ್ಪ ಹಾಗೂ ಪ್ರಕಾಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕೊನೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ತ.ನಂ.ಜ್ಞಾನೇಶ್ವರ, ಮಹಾಲಕ್ಷ್ಮಮ್ಮ, ಚಂದ್ರಶೇಖರ್ ಹಾಗೂ ಕಮಲ ಕವನ ವಾಚಿಸಿದರು. 

Tuesday 17 July 2012

ರಸಪ್ರಶ್ನೆ

'ಪ್ರಜಾವಾಣಿ' ವರದಿ

ದಿನಾಂಕ 18-11-2006ರಂದು ಕೊತ್ತಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಕೊತ್ತಗೆರೆ ಕ್ಲಸ್ಟರ್ ಮಟ್ಟದ ಕನ್ನಡ ನಾಡು ನುಡಿ ಕುರಿತ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

Monday 16 July 2012

ಕನ್ನಡ ರಾಜ್ಯೋತ್ಸವ

ತುಮಕೂರು ಜಿಲ್ಲಾ ಕಸಾಪ ಅಧ್ಯಕ್ಷ ನಿಟ್ಟೂರು ರಾಂಪುರ ಸದಾನಂದ ಅವರು ಮಾತನಾಡುತ್ತಿರುವುದು


ದಿನಾಂಕ 25-11-2006ರಂದು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು, ಕೊತ್ತಗೆರೆ ಹಾಗೂ ಶ್ರೀ ರಾಮಾಂಜನೇಯ ಸೇವಾ ಸಮಿತಿ, ಚಿಕ್ಕಮಳಲವಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಚಿಕ್ಕಮಳಲವಾಡಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ತುಮಕೂರು ಜಿಲ್ಲಾ ಕಸಾಪ ಅಧ್ಯಕ್ಷ ನಿಟ್ಟೂರು ರಾಂಪುರ ಸದಾನಂದ ಅಧ್ಯಕ್ಷತೆ ವಹಿಸಿದ್ದರು. ಕುಣಿಗಲ್ ತಾಲ್ಲೂಕು ಕಸಾಪ ಅಧ್ಯಕ್ಷ ತಗಡೂರು ವೀರಭದ್ರಪ್ಪ ಉಪನ್ಯಾಸ ನೀಡಿದರು. ಅರೆಶಂಕರ ಮಠದ ಸಿದ್ಧರಾಮ ಚೈತನ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

Saturday 14 July 2012

ಕುವೆಂಪು ಜಯಂತಿ


ಕೊತ್ತಗೆರೆ ಹೋಬಳಿ ಕಸಾಪ ಅಧ್ಯಕ್ಷ ತ.ನಂ.ಜ್ಞಾನೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು.

ದಿನಾಂಕ 4-2-2006ರಂದು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು, ಕೊತ್ತಗೆರೆ ವತಿಯಿಂದ ಭಕ್ತರಹಳ್ಳಿಯ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಕುವೆಂಪು ಜಯಂತಿ ಆಚರಿಸಲಾಯಿತು. ಕುಣಿಗಲ್ ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರೊ.ಎಂ.ಸಿ.ವೆಂಕಟೇಶಪ್ಪ ಕುವೆಂಪು ಕುರಿತು ಉಪನ್ಯಾಸ ನೀಡಿದರು. ಕುಣಿಗಲ್ ತಾಲ್ಲೂಕು ಕಸಾಪ ಅಧ್ಯಕ್ಷ ತಗಡೂರು ವೀರಭದ್ರಪ್ಪ ಅಧ್ಯಕ್ಷತೆ ವಹಿಸಿದ್ದರು.  ಕೊತ್ತಗೆರೆ ಹೋಬಳಿ  ಕಸಾಪ ಅಧ್ಯಕ್ಷ ತ.ನಂ.ಜ್ಞಾನೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು.